Home
            City Finances

       Works Information

             City Council
             City Staff
             City Statistics

      Right to    Information

    Budget

    Council Resolutions

Schemes

Tenders

       Public Notifications
     Know your Ward
Tourism
FAQs

Related Links

Contact Us

Modules Online

Property Tax

Birth/Death
Financials

CMSMTDP

Grievances
  

Nirmala Nagara

 

Urban Stree Shakti for Poverty Alleviation

ಸ್ತ್ರೀ ಶಕ್ತಿ

ನಗರಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ (ವಾರ್ಷಿಕ ಆದಾಯ ರೂ. 23,124/-) ವಾಸ ಮಾಡುವ ಕುಟುಂಬದಲ್ಲಿ 10 - 15 / 20 ಸಮಾನ ಮನಸ್ಕ ಸ್ತ್ರೀಯರನ್ನು ಒಗ್ಗೂಡಿಸಿ ಉಳಿತಾಯ ಗುಂಪನ್ನು ರಚನೆ ಮಾಡಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗುಂಪಿನಲ್ಲಿ ಆಯ್ಕೆಯಾದ ಇಬ್ಬರು ಪ್ರತಿನಿಧಿಗಳ ಹೆಸರಿನಲ್ಲಿ ಜಂಟಿ ಖಾತೆ ತೆರೆದು, ಆರ್ಥಿಕ ಚಟುವಟಿಕೆ ನಿರ್ವಹಿಸುವುದು. ಉಳಿತಾಯ ಖಾತೆ ತೆರೆದ ನಂತರ ಗುಂಪಿನ ಸದಸ್ಯರು ವಾರಕ್ಕೊಮ್ಮೇಯಾದರೂ ಸಭೆ ನಡೆಸಿ ಕನಿಷ್ಟ ವಾರಕ್ಕೆ ತಲಾ 10 ರೂಪಾಯಿಯಂತೆ ಉಳಿತಾಯ ಮಾಡಿ, ಸಂಗ್ರಹವಾದ ಉಳಿತಾಯದ ಹಣವನ್ನು ಸಭೆ ನಡೆದ ಮರುದಿನವೇ ಬ್ಯಾಂಕಿಗೆ ಜಮಾ ಮಾಡುವುದು. ಆರು ತಿಂಗಳವರೆಗೂ ಕೇವಲ ಉಳಿತಾಯ ಮಾತ್ರ ಮಾಡುತ್ತಿರಬೇಕು. ಆರು ತಿಂಗಳ ನಂತರ ಆಂತರಿಕ ಸಾಲ ವಿತರಣೆ ಗುಂಪಿನಲ್ಲಿ ಅವಶ್ಯಕತೆಯಿರುವ ಸದಸ್ಯರಿಗೆ, ಅವರ ಉಳಿತಾಯದಲ್ಲಿನ    1 : 2  ಅನುಪಾತದಲ್ಲಿ ಸಾಲ ಪಡೆಯಬಹುದು. ಸಾಲ ಪಡೆಯುವ ಸದಸ್ಯರು ಸದರಿ ಗುಂಪಿನ ಇಬ್ಬರು ಸದಸ್ಯರ ಜಾಮೀನು ಪಡೆದು ನಿಗಧಿತ ನಮೂನೆಯಲ್ಲಿ ರೆವೆನ್ಯೂ ಸ್ಟಾಂಪ್‌ ಮೇಲೆ ಸಹಿ ಮಾಡಿ ಸಾಲ ಪಡೆಯಬಹುದು. ಹೀಗೆ ಪಡೆದ ಸಾಲವನ್ನು ಹತ್ತು ಕಂತುಗಳಲ್ಲಿ ಶೇಕಡ 2 ರ ಸೇವಾ ಶುಲ್ಕ (ಬಡ್ಡಿ) ದೊಂದಿಗೆ ಮರುಪಾವತಿ ಮಾಡುವುದು. ತಪ್ಪಿದಲ್ಲಿ ಗುಂಪಿನ ಸದಸ್ಯರು ನಿಗಧಿ ಮಾಡುವ ದಂಡ ಶುಲ್ಕದ ಜೊತೆಗೆ ಸಾಲ ಮರುಪಾವತಿ ಮಾಡುವುದು.

ಖಾತೆ ತೆರೆದು ಒಂದು ವರ್ಷ ಕಳೆದ ನಂತರ ನಗರಸಭೆಯಿಂದ ಶ್ರೇಣಿಕರಣ ಮಾಡಿ, 'ಎ' ಶ್ರೇಣಿ (ವಾರಕ್ಕೊಮ್ಮೆಯಾದರೂ ಸಭೆ ಸೇರಿ ಉಳಿತಾಯ ಮಾಡಬೇಕು, ಸಂಗ್ರಹವಾದ ಹಣವನ್ನು ಮರುದಿನವೇ ಬ್ಯಾಂಕಿಗೆ ಪಾವತಿ ಮಾಡುವುದು, ಸಭೆಯಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಹಾಜರಾತಿ ಇರಬೇಕು, ಪುಸ್ತಕ ನಿರ್ವಹಣೆ ಅತ್ಯುತ್ತಮವಾಗಿರಬೇಕು, ಸಂಘದಲ್ಲಿ ಚರ್ಚೆಯಾದ ಪ್ರತಿಯೊಂದು ವಿಷಯ ತೀರ್ಮಾನಗಳು ನಮೂದಾಗಿರಬೇಕು) ಪಡೆದ ಸ್ತ್ರೀ ಶಕ್ತಿ ಸಂಘಗಳಿಗೆ ಸರ್ಕಾರ ನಿಗಧಿಪಡಿಸಿದ 5,000 ರೂ. ವರ್ತುಲ ನಿಧಿಯನ್ನು ಸಂಬಂಧಪಟ್ಟ ಖಾತೆಗೆ ಜಮಾ ಮಾಡಲಾಗುವುದು. ಶ್ರೇಣಿಕರಣವಾದ ಸಂಘಗಳನ್ನು ಬ್ಯಾಂಕ್‌ ಸಂಪರ್ಕ ಕಲ್ಪಿಸಿಕೊಡಲಾಗುವುದು (ಬ್ಯಾಂಕ್‌ನಿಂದ ಸ್ತ್ರೀ ಶಕ್ತಿ ಗುಂಪಿಗೆ ಸಾಲ ಒದಗಿಸುವುದು).

ಮೇಲ್ಕಂಡ ಕಾರ್ಯವನ್ನು ನಗರಸಭೆಯ ಸ್ವರ್ಣ ಜಯಂತಿ ಶಹರಿ ರೋಜ್ಗಾರ್‌ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಮ್ಯೂನಿಟಿ ಆರ್ಗನೈಜರ್‌ಗಳು (ಸಮುದಾಯ ಸಂಘಟಕರು) ಸ್ತ್ರೀ ಶಕ್ತಿ ಗುಂಪುಗಳಿಗೆ ಹೆಚ್ಚಿನ ತಿಳುವಳಿಕೆ ನೀಡಿ ಯೋಜನೆಯಡಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಗುಂಪುಗಳಿಗೆ ನೇರವಾಗಿ ದೊರಕುವಲ್ಲಿ  ಸಹಕರಿಸುತ್ತಾರೆ ಹಾಗೂ ಸ್ತ್ರೀ ಶಕ್ತಿ ಗುಂಪುಗಳು ಸ್ವಾವಲಂಭಿಯಾಗುವಲ್ಲಿ ಹೆಚ್ಚಿನ ಪಾತ್ರವಹಿಸುತ್ತಾರೆ.

ಜೊತೆಗೆ  ಜೀವನಮಟ್ಟ ಸುಧಾರಣೆಗಾಗಿ ಉಳಿತಾಯ ಗುಂಪಿನ ಸದಸ್ಯರು ಗುಂಪಿನಿಂದ ಕೈಸಾಲ ಪಡೆದು, ಆ ಹಣವನ್ನು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿ ಆರ್ಥಿಕ ಅಭಿವೃದ್ಧಿಯಾಗುವಲ್ಲಿ ಸಹಕರಿಸುವುದು ಹಾಗೂ ಅವರ ಮೂಲಭೂತ ಸೌಕರ್ಯಗಳನ್ನು ಅವರೇ ಗುರುತಿಸಿಕೊಂಡು ಸಂಬಂಧಪಟ್ಟ ಇಲಾಖೆಗಳಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಸಾಮಾಜಿಕ ತಿಳುವಳಿಕೆ ನೀಡಲಾಗುವುದು.

ನಿರ್ಮಲ ನಗರ ಯೋಜನೆಯಡಿ ನಿರ್ಮಿಸಿರುವ ಸಮುದಾಯ ಶೌಚಾಲಯಗಳ ನಿರ್ವಹಣೆ ಹಾಗೂ ಮನೆ ಮನೆಯಿಂದ ಕಸ ಸಂಗ್ರಹಿಸುವ ಕೆಲಸವನ್ನು ಕೆಲವು ಸ್ತ್ರೀ ಶಕ್ತಿ ಗುಂಪುಗಳಿಗೆ ವಹಿಸಿಕೊಡಲಾಗಿದೆ.

ಮಂಡ್ಯ ನಗರಸಭೆ ನಿರ್ಮಲ ನಗರ ಸ್ತ್ರೀ ಶಕ್ತಿ ಯೋಜನೆಯ ಪ್ರಗತಿ ವರದಿಗಳು (Stree Shakthi Progress Reports)

 

 

 

 
Maintained by Sri. Ramesh.M.L, Community Affairs Officer, Contact No. 94485-05262  Last updated on 16/01/2008